ಅರಿವು ಬರಹ


ಸಾಹಿತ್ಯಿಕ ಪತ್ರಿಕೆ

“ಅರಿವು-ಬರಹ”

‘ಅರಿವು-ಬರಹ’ವೆಂಬುದು ೧೯೯೨ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನ ಕೊಣಾಜೆಯಿಂದ ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರುಗಳ ಗುಂಪೊಂದು ಹುಟ್ಟು ಹಾಕಿದ ಪತ್ರಿಕೆ. ‘ಅರಿವು-ಬರಹ’ದ ಸಂಚಿಕೆಗಳನ್ನು ಒಂದು ಎರಡು ಎಂದು ಮುದ್ರಿಸಲಾಯಿತೇ ವಿನಾ ನಿಗದಿತ ನಿಯತಕಾಲಿಕತೆಯನ್ನು ಘೋಷಿಸಿಕೊಂಡಿರಲಿಲ್ಲ. ‘ಅರಿವು-ಬರಹ-೧ರ ಒಳಹೊದಿಕೆಯಲ್ಲ ‘ಮಂಗೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ ಪತ್ರಿಕೆ’ ಎಂಬುದಾಗಿ ಘೋಷಿಸಿ ಎರಡನೇ ಸಂಚಿಕೆಯಲ್ಲಿ ಅದಕ್ಕಾತಿ ವಿಷಾದ ಸೂಚಿಸಿ ಈ ಪತ್ರಿಕೆಗೂ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಸಂಬಂಧವಿಲ್ಲ ಎಂಬ ಘೋಷಣೆ ಹೊರಡಿಸಲಾಯಿತು. ‘ಅರಿವು-ಬರಹ’ವನ್ನು ಶುದ್ಧ ಸಾಹಿತ್ಯಿಕ ಪತ್ರಿಕೆಯೆಂದು ಗುರುತಿಸುವುದು ಕಷ್ಟ. ಇದು ಮುಖ್ಯವಾಗಿ ವೈಚಾರಿಕ ಸಾಹಿತ್ಯ ಪತ್ರಿಕೆ. ಇಲ್ಲಿಯ ಭಾಷೆ ಜನರಿಗೆ ಅರ್ಥವಾಗುವಂತಿರಲಿಲ್ಲ. ಅರಿವು ಬರಹ ಕನ್ನಡದ ಪ್ರಚಲಿತ ಭಾಷೆಗೆ ಅನ್ಯವಾಗದೆ ಎಂಬುದುದಾಗಿ ಓದುಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಅರಿವು ಬರಹ ಮೂರು ಸಂಚಿಕೆಗಳ ನಂತರ ಬರಲಿಲ್ಲ. ‘ಅರಿವು-ಬರಹ’ಕ್ಕೆ ‘ಎಂಟು ಮಂದಿ’ ಸಂಪಾದಕರುಗಳ ಹೆಸರಿದ್ದುದು.