ಸಂವಾದ


ಸಾಹಿತ್ಯಿಕ - ಸಾಂಸ್ಕೃತಿಕ ದ್ವೈಮಾಸಿಕ ಸಂಕಲನ

ಪ್ರಿಯ ಗೆಳೆಯರೇ ...

ನಾವು ಆರು ಜನ ಗೆಳೆಯರು ಸೇರಿ ಸಂವಾದ ಸಾಹಿತ್ಯಿಕ-ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯನ್ನು ಆರಂಭಿಸಲು ಯೋಚಿಸಿದ್ದೇವೆ. ಕನ್ನಡ ಮನಸ್ಸಿನ ತುಡಿತಗಳನ್ನು ಮತ್ತು ಸಮಗ್ರ ಗ್ರಹಿಕೇಗಳನ್ನು ದಾಖಲಿಸುವ ಮತ್ತು ಆ ಬಗ್ಗೆ ಮುಕ್ತ ಸಂವಾದಕ್ಕೆ ವೇದಿಕೆಯನ್ನು ಒದಗಿಸುವ ಪ್ರಯತ್ನವಿದು. ಕರ್ನಾಟಕದಾದ್ಯಂತ ಮತ್ತು ಕರ್ನಾಟಕದಾಚೆಗಿನ ಎಲ್ಲ ಸಂವೇದನಾಶೀಲ ಮನಸ್ಸುಗಳ ಅಭಿವ್ಯಕ್ತಿಯ ಅಗತ್ಯಕ್ಕಾಗಿ ಈ ಪತ್ರಿಕೆ. ಈಗಿರುವ ಪತ್ರಿಕೆಗಳು ನಗರ ಕೇಂದ್ರೀತವಾಗಿರುವುದರಿಂದ ಮತ್ತು ಸ್ಥಾಪಿತವಲಯಗಳಿಗೆ ತಮ್ಮ ನೆಲೆಯನು್ನ ಸಂಕುಚಿತಗೊಳಿಸುತ್ತಾ ನಡೆದಿರುವುದರಿಂದ ನಮ್ಮ ಭಾಷೆಯಲ್ಲಿ ಸಂಭವಿಸುವ ಘಟನೆಗಳನ್ನು ಗ್ರಹಿಸುವ, ನೀತಿ ನಿರೂಪಿಸುವ ಮತ್ತು ನಿರ್ವಹಿಸುವ ಕೆಲಸ ಸಮಗ್ರವಾಗುತ್ತಿಲ್ಲ. ಆದ್ದರಿಂದ ಕನ್ನಡ ಬದುಕಿನ ಎಲ್ಲಾ ಕ್ರಿಯಾಶೀಲ ಎಳೆಗಳನ್ನು ದುರಿಗಟ್ಟಿಸಿ ಕೊಡುವ ಕೆಲಸ ಈಗಲಾದರೂ ಆಗಬೇಕಾಗಿದೆ. ಬದುಕನ್ನು ಎಲ್ಲಾ ದಿಕ್ಕುಗಳಿಂದಲೂ ಶೋಧಿಸುವ, ಅಭಿವ್ಯಕ್ತಿಯ ಹೊಸ ರೂಪಗಳನ್ನು ಆವಿಷ್ಕರಿಸುವ, ಹೊಸ-ಕಾಣ್ಕೆಗಳನ್ನು ಕಂಡರಿಸುವ - ಒಟ್ಟಿನಲ್ಲಿ, ಬದುಕಿನ ಚೆಲುವನ್ನು ಹೆಚ್ಚಿಸುತ್ತವೆನ್ನುವ ಎಲ್ಲ ಬಗೆಯ ಚಿಂತನೆಗಳನ್ನು ನಿಕಷಕ್ಕೊಡ್ಡುವ ಮೂಲಕ ಮುಕ್ತ ಚರ್ಚೆಗೆ ಈ ಪತ್ರಿಕೆ. ಅಲ್ಲದೆ, ಸಮಕಾಲೀನ ಬದುಕಿನ ಅನಿವಾರ್ಯ ಅಂಗವಾದ ವೈಜ್ಞಾನಿಕ ಬೆಳವಣಿಗೆ ಮತ್ತು ಮನುಷ್ಯ ಜೀವನದ ಚಿಂತನವಾದ ಆಧ್ಯಾತ್ಮಿಕ ತುಡಿತ ಇಡಿತ ಇವೆರಡನ್ನು ಒಂದುಗೂಡಿಸಿಕೊಳ್ಳುವ ಸವಾಲು ಕೂಡ ನಮ್ಮ ಮುಂದಿದೆ ನೀವು ಸಹಕರಿಸಿದರೆ ನಾವು ಇಷ್ಟಲ್ಲವನ್ನು ಮಾಡಲು ಪ್ರಯತ್ನಿಸುತ್ತೇವೆ.