ಮಾತುಕತೆ
ಶ್ರೀ ನೀಲಕಂಠೇಶ್ವರ ನಾಟ್ಯ ಸೇವಾ ಸಂಘ
“ಮಾತುಕತೆ ” ...
ಮಾತುಕತೆ 1987ರಲ್ಲಿ ಪ್ರಾರಂಭವಾದ ನೀನಾಸಂನ ಒಂದು ವಾರ್ತಾ-ಪತ್ರಿಕೆ. ಇದು ನೀನಾಸಂನ ಚಟುವಟಿಕೆಗಳ ವರದಿಯೊಡನೆ ಪ್ರಮುಖ ಮತ್ತು ಉಪಯುಕ್ತ ಸಾಂಸ್ಕೃತಿಕ ತಂಡಗಳ ಬಗೆಗಿನ ವರದಿಗಳನ್ನೊಳಗೊಂಡ ಈ ತ್ರೈಮಾಸಿಕ ಪತ್ರಿಕೆಯನ್ನು ನೀನಾಸಂನ ಹಿತೈಷಿಗಳಿಗೆ ಹಾಗೂ ಕರ್ನಾಟಕ ಎಲ್ಲಾ ಭಾಗಗಳ ಚಂದಾದಾರರಿಗೆ ವಿತರಿಸಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇದರ ಕಾರ್ಯವ್ಯಾಪ್ತಿಯು ವಿಸ್ತರಿಸಿದ್ದು, ಪ್ರಸ್ತುತ ಈ ಪತ್ರಿಕೆ ನೀನಾಸಂನ ವರದಿಯೊಡನೆ ಕೆಲ ವಿಶೇಷ ಸಂದರ್ಭಗಳಲ್ಲಿ ಅನೇಕ ಚಿಂತಕರು ನೀಡಿದ ಉಪನ್ಯಾಸಗಳ ಕನ್ನಡ ಅವತರಣಿಕೆಯನ್ನು, ಹಾಗೂ ವಿಶೇಷ ಬರಹಗಳನ್ನು ಪ್ರಕಟಿಸುತ್ತಿದೆ.