ರಾಷ್ಟ್ರೀಯ ನಾಯಕರು ಕರ್ನಾಟಕ ಏಕೀಕರಣದ ವಿಷಯದಲ್ಲಿ ಆಸಕ್ತಿ ವಹಿಸಿದ ಅನಂತರ ಅದಕ್ಕೊಂದು ನಿಶ್ಚಿತ ಎಂಬ ಸ್ವರೂಪ ದೊರೆಯಿತು. ಈ ನಿಟ್ಟಿನಲ್ಲಿ ಯಾಜಮಾನ್ಯ ವಹಿಸಿದವರು ಆಲೂರು ವೆಂಕಟರಾಯರು. ೧೯೦೫ ರಿಂದಲೂ ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರುಇವರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಆಲೂರರ ಕರ್ನಾಟಕ ಏಕೀಕರಣ ಪರ ಹೋರಾಟಕ್ಕೆ ‘ಹೋಂರೂಲ್’ ಸಂದರ್ಭದಲ್ಲಿ ತಿಲಕರು ಆಡಿದ್ದ ‘ಕನ್ನಡದಲ್ಲಿ ಮಾತನಾಡಿ ಕನ್ನಡ ಭಾಷೆಯ ಹಕ್ಕನ್ನು ಸ್ಥಾಪಿಸು’ಎಂಬ ಮಾತುಗಳೂ ಪ್ರೇರಣೆ ಆಗಿದ್ದವು. ಕನ್ನಡ ಮತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು. . . . ಮುಂದೆ ಓದಿ
‘ಕೃಷ್ಣಮಹೀಶ್ವರೀ’ ನಾಟಕ ಕೃತಿ ದಾವಣಗೆರೆಯ ಎ.ವಿ.ಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಎಚ್. ಚಿದಂಬರಯ್ಯ ಅವರ ರಚನೆ. ‘ಸುಶೀಲಾ ಪರಿಣಯ’, ‘ಸ್ತ್ರೀಧರ್ಮ ಸಂಗ್ರಹ’, ‘ನೀತಿಸಾರ’, ‘ತಾರಾನಾಥ’, ‘ಕಾಲಾಂತಕ’, ‘ಮಾಧವರಾವ್ ಸಿಂಧೆ’, ‘ಗುಣ ನಿರೂಪಣೆ’ ಮುಂತಾದ ಕೃತಿಗಳನ್ನು ಕೂಡ ಚಿದಂಬರಯ್ಯನವರು ಬರೆದಿದ್ದಾರೆ. ಹೊಳೇನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಸಿದ್ಧಿಯ ಹೊಸಕೆರೆ ಚಿದಂಬರಯ್ಯನವರು ಸುಮಾರು ಎಪ್ಪತ್ತು ಪುಸ್ತಕ ಹಾಗೂ ನೂರಾರು ಲೇಖನಗಳನ್ನು ಬರೆದವರು ಎನ್ನುವ ಮಾಹಿತಿ ಪುಸ್ತಕದಲ್ಲಿದೆ. . . . ಮುಂದೆ ಓದಿ
ಇದು 1928ರಲ್ಲಿ ಪ್ರಕಟವಾದ ಕವಿತೆಗಳ ಸಂಗ್ರಹ ‘ಕಿರಿಯ ಕಾಣಿಕೆ’. ಶ್ರೀಮನ್ಮಹಾರಾಜರವರ ಕಾಲೇಜಿನ ಕರ್ನಾಟಕ ಸಂಘದ ವಿದ್ಯಾರ್ಥಿಗಳು ಕೆಲವರು ರಚಿಸಿರತಕ್ಕ ಪುಸ್ತಕ.ಇದರಲ್ಲಿ ತೀ.ನಂ. ಶ್ರೀಕಂಠಯ್ಯನವರ 8 ಕವಿತೆಗಳು, ಕೆ.ವಿ. ಪುಟ್ಟಪ್ಪನವರ 7 ಕವಿತೆಗಳು, ಎ.ಕೆ. ಪುಟ್ಟರಾಮು ಅವರ 3 ಕವಿತೆಗಳು, ಎಲ್.ಗುಂಡಪ್ಪ ಅವರ 8 ಕವಿತೆಗಳು, ಪಿ.ಟಿ. ನರಸಿಂಹಾಚಾರ್ ಅವರ 2 ಕವಿತೆಗಳು ಮತ್ತು ಡಿ.ಎಲ್. ನರಸಿಂಹಾಚಾರ್ ಅವರ 2 ಕವಿತೆಗಳು, ಹೀಗೆ ಒಟ್ಟು 30 ಕವಿತೆಗಳಿವೆ. . . . ಮುಂದೆ ಓದಿ
ಅಷ್ಟಮ ಡೆಮಿ ಆಕಾರದ ‘ಜಮಾಖರ್ಚಿನ ಪದ್ಧತಿ’ ಪುಸ್ತಕದ ಕರ್ತೃ ಗುಬ್ಬಿ ಚಿ. ಲಕ್ಷ್ಮೀನಾರಣಯ್ಯನವರು. ೧೫೨ ಪುಟಗಳ ೧೨ ಆಣೆ ಕ್ರಯದ ಈ ಪುಸ್ತಕವನ್ನು ಬೆಂಗಳೂರು ಸಿಟಿಯ ಮೆಮೋರಿಯಲ್ ಮುದ್ರಾಲಯದವರು ಮುದ್ರಿಸಿರುತ್ತಾರೆ. ೧೯೧೩ರಲ್ಲಿ ಮೊದಲ ಆವೃತ್ತಿಯಾಗಿ ಮುದ್ರಣಗೊಂಡ ಬೆಂಗಳೂರು ಕಮರ್ಷಿಯಲ್ ಹೈಸ್ಕೂಲ್ ಪ್ರಿನ್ಸಿಪಾಲರಾದ ಲಕ್ಷ್ಮೀನಾರಣಯ್ಯನವರ ಈ ಪುಸ್ತಕದ ಮೊದಲ ಆವೃತ್ತಿಯಲ್ಲಿ ೧೦೦೦ ಪ್ರತಿಗಳು ಹೊರಬಂದಿವೆ. ಈ ಕೃತಿಯನ್ನು ಕನ್ನಡದ ಯಾವ ಗ್ರಂಥಸೂಚಿಗಳಲ್ಲಿಯೂ ನಮೂದಿಸಿಲ್ಲ. . . . ಮುಂದೆ ಓದಿ
ರೆವರೆಂಡ್ ಫ್ರೆಡ್ರಿಕ್ ಜಿಗ್ಲರ್ ಅವರ `ಇಂಗ್ಲಿಷ್ ಮತ್ತು ಕನ್ನಡ ಶಾಲಾನಿಘಂಟು' (An English and Canarese SCHOOL-DICTIONARY)ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ನಿಂದ 1876ರಲ್ಲಿ ಮುದ್ರಣಗೊಂಡಿದೆ. 1919ರ ಐದನೆಯ ಆವೃತ್ತಿಯಲ್ಲಿ ಈ ನಿಘಂಟನ್ನು ಕ್ರಿಸ್ಟಾನುಜ ವತ್ಸ ಎಂಬ ವಿದ್ವಾಂಸನು ಪರಿಷ್ಕರಿಸಿ ಪ್ರಕಟಿಸಿದನು. 1991ರಲ್ಲಿ ಇದರ 11ನೇ ಆವೃತ್ತಿಯು Ziegler’s English-Kannada Dictionaryಹೆಸರಿನಲ್ಲಿ ಹೊರಬಂದಿರುವುದು ಇದರ ಜನಪ್ರಿಯತೆ ಹಾಗೂ ಉಪಯುಕ್ತತೆಯನ್ನು ಸೂಚಿಸುವಂತಿದೆ. . . . ಮುಂದೆ ಓದಿ
ರಾ.ರಘುನಾಥರಾಯ ಅವರ `ಕರ್ಣಾಟಕ ಭಾಷಾ ವ್ಯಾಕರಣೋಪನ್ಯಾಸ ಮನ್ಜರಿ 1894ರಲ್ಲಿ ಮುದ್ರಣಗೊಂಡಿರುವ ಅಪರೂಪದ ಕೃತಿ. ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಭಾಷಾಸ್ವರೂಪ ನಿರೂಪಣೆ ಇದ್ದರೆ, ಎರಡನೇ ಭಾಗದಲ್ಲಿ `ನವೀನೋತ್ಪತ್ತಿ ವಿವರಣೆಯಿದೆ. ಪುಸ್ತಕ ಒಟ್ಟು 118 ಪುಟಗಳನ್ನೊಳಗೊಂಡಿದೆ. ಬೆಲೆಯನ್ನು ನಮೂದಿಸಿಲ್ಲ.`ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕರ್ಣಾಟ ವ್ಯಾಕರಣವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಸಂದರ್ಭದಲ್ಲಿ, ಸುಮಾರು ಮೂರು ವರ್ಷಗಳ ಕೆಳಗೆ ಈ ಉಪನ್ಯಾಸಗಳ ಮುಖ್ಯಾಂಶಗಳನ್ನು ಬರೆದಿಟ್ಟೆನು. . . . ಮುಂದೆ ಓದಿ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಕಟಿಸಿರುವ Tamil First Reader ಕೃತಿಯನ್ನು ವಿ.ನರಸಿಂಹ ಮೂರ್ತಿ ಎನ್ನುವವರು ಬರೆದಿದ್ದಾರೆ. ಈ ಕೃತಿ ಮದರಾಸಿನ ಎಸ್.ಪಿ.ಸಿ.ಕೆ ಪ್ರೆಸ್, ವೇಪೇರಿಯಲ್ಲಿ (1896ರಲ್ಲಿ) ಮುದ್ರಣಗೊಂಡಿದೆ. ಪುಸ್ತಕದ ಮೇಲೆ ಅಚ್ಚಾಗಿರುವಂತೆ ಇದು- ‘ಅನ್ಯರ ಸಹಾಯವಿಲ್ಲದೆ ಕನ್ನಡಿಗರಿಗೆ ತಮಿಳ ಜ್ಞಾನವಾಗುವ ಹಾಗೆ ಬರೆದಿರುವ ತಮಿಳ ಪುಸ್ತಕವು’. . . . ಮುಂದೆ ಓದಿ
ಕನ್ನಡ ಛಂದಸ್ಸನ್ನು ಕುರಿತ ಮೊದಲ ಮುದ್ರಿತ ಪುಸ್ತಕವಾದ ‘ನಾಗವರ್ಮನ ಕನ್ನಡ ಛಂದಸ್ಸು’ ಎನ್ನುವ ಈ ಕೃತಿಯನ್ನು 1875ರಲ್ಲಿ ರೆವರೆಂಡ್ ಎಫ್. ಕಿಟ್ಟೆಲ್ ಸಂಪಾದಿಸಿರುತ್ತಾರೆ. ಇದರ ಇಂಗ್ಲಿಷ್ ನಾಮಾಂತರ Nagavarma’s Canarese Prosody edited with an introduction to the work ATURE. ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿಯು 1875ರಲ್ಲಿ ಈ ಕೃತಿಯನ್ನು ಪ್ರಕಟಿಸಿದೆ. 161 ಪುಟಗಳ ಈ ಪುಸ್ತಕದ ಬೆಲೆ ಎಲ್ಲಿಯೂ ನಮೂದಾಗಿಲ್ಲ. . . . ಮುಂದೆ ಓದಿ
`ರಘುನಾಥಸಿಂಹ ಎಂ.ಟಿ.ವಲ್ಲಭಯ್ಯಂಗಾರ್ಯ ಅವರ ಐತಿಹಾಸಿಕ ಕಾದಂಬರಿ. 1922ರಲ್ಲಿ ದ್ವಿತೀಯ ಆವೃತ್ತಿ ಪ್ರಕಟವಾದಾಗ, ಮುದ್ರಣಗೊಂಡ ಪ್ರತಿಗಳ ಸಂಖ್ಯೆ 1500. ಆಗಿನ ಇದರ ಕ್ರಯ 1 ರೂಪಾಯಿ 12 ಆಣೆ. ಕೋಟೆ ಸಿಟಿ ಮುದ್ರಣಾಲಯ, ಬೆಂಗಳೂರು- ಇಲ್ಲಿ ಅಚ್ಚಾದ ಈ ಕೃತಿ ನಂಜನಗೂಡು-ನಂದಿನೀ-ಹಿತೈಷಿಣೀ-ಮಾತೃಮಂದಿರದಿಂದ ಪ್ರಕಟಗೊಂಡಿದೆ. ಈ ಹಿತೈಷಿಣಿ ಬೇರೆ ಯಾರೂ ಅಲ್ಲ- ಆ ಕಾಲದ ಪ್ರಸಿದ್ಧ ಲೇಖಕಿ ನಂಜನಗೂಡು ತಿರುಮಲಾಂಬ. . . . ಮುಂದೆ ಓದಿ
‘ಸುವ್ರತ ಅಥವಾ ಕರ್ಮವಿಲಾಸ’ (suvratha, the child of karma ) ಎನ್ನುವುದು 1915ರಲ್ಲಿ ಪ್ರಕಟವಾದ ಮಂ.ಅ.ರಾಮಾನುಜಯ್ಯಂಗಾರ್ಯ ಅವರ ಕಾದಂಬರಿ. ಈ ಬಗ್ಗೆ ಲೇಖಕರೇ ಪುಸ್ತಕದ ಅರಿಕೆಯಲ್ಲಿ ಹೇಳಿಕೊಂಡಿದ್ದಾರೆ.ಈ ಪುಸ್ತಕವನ್ನು ಉಡುಪಿಯ ‘ಸದಾನಂದ’ ಮುದ್ರಾಶಾಲೆಯ ಮ್ಯಾನೇಜಿಂಗ್ ಪ್ರೊಪ್ರೈಟರ್ ಯು.ನರಸಿಂಹ ಮಲ್ಯ ಅವರು ಮುದ್ರಿಸಿದ್ದಾರೆ. ಕೃತಿಯ ಬೆಲೆಯನ್ನು ಎಲ್ಲಿಯೂ ನಮೂದಿಸಲಾಗಿಲ್ಲ...ಮುಂದೆ ಓದಿ
ಆರ್.ನರಸಿಂಹಾಚಾರ್ ಅವರ ‘ವಸ್ತು ಪಾಠಗಳು’ ಎನ್ನುವ ಕೃತಿ 1920ರಲ್ಲಿ ಮೂರನೇ ಬಾರಿಗೆ ಮುದ್ರಣವನ್ನು ಕಂಡಿದೆ. ಮೂರನೇ ಮುದ್ರಣದಲ್ಲಿ ಮೂರು ಸಾವಿರ ಪ್ರತಿಗಳು ಹೊರಬಂದಿದ್ದು, ಮೈಸೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಪಡಿಸಿರುವ ಈ ಕೃತಿ ಬೆಂಗಳೂರಿನ caxton press ನಲ್ಲಿ ಮುದ್ರಣಗೊಂಡಿದೆ...ಮುಂದೆ ಓದಿ
‘ಅಂಕಗಣಿತ’ ಅನೇಕ ವಿರಳ ಮಾಹಿತಿಗಳನ್ನು ಒಳಗೊಂಡಿರುವ ಒಂದು ಅಪರೂಪದ ಕೃತಿ. ಇದರ ಮೊದಲ ಆವೃತ್ತಿ ಯಾವಾಗ ಪ್ರಕಟವಾಯಿತು ಎನ್ನುವುದು ತಿಳಿದಿಲ್ಲ. ಎರಡನೇ ಆವೃತ್ತಿಯನ್ನು ಬೆಂಗಳೂರಿನ ದಿ ಆಲ್ಬಿಯನ್ ಪ್ರೆಸ್ನಲ್ಲಿ 1876ರಲ್ಲಿ ಮುದ್ರಿಸಲಾಗಿದೆ. ಇದರ ಮುದ್ರಕರಾದ ಡಬ್ಲ್ಯು.ಡಬ್ಲ್ಯು. ಗೌಂಟ್ ಅವರು 10,000 ಪ್ರತಿಗಳನ್ನು ಅಚ್ಚುಹಾಕಿಸಿರುತ್ತಾರೆ. 323+3 ಪುಟಗಳ ಈ ಕೃತಿಯ ಬೆಲೆಯನ್ನು ನಮೂದಿಸಲಾಗಿಲ್ಲ. ಇದರ ಪ್ರಕಾಶಕರಾದ ಬೆಂಗಳೂರಿನ ಮೈಸೂರು ವಿದ್ಯಾಭ್ಯಾಸ ಇಲಾಖೆಯು ಇದನ್ನು ಮೈಸೂರು ಮತ್ತು ಕೊಡಗು ಪ್ರಾಂತದ ವಿದ್ಯಾರ್ಥಿಗಳಿಗೆ ಪಠ್ಯವಾಗಿಟ್ಟಿದ್ದರು. .. ಮುಂದೆ ಓದಿ
‘ಕನ್ನಡ ಪತ್ರವ್ಯವಹಾರ ಬೋಧಿನಿಯು ಅಥವಾ ವ್ಯವಹಾರಸಾಹಿತ್ಯ’ ದತ್ತಾಜೀರಾವ ಆಬಾಜೀರಾವ ಸಾವಂತ ಅವರ ಕೃತಿ. ಲೇಖಕರು ಬೆಳಗಾಂವದ ತಮ್ಮ ಶ್ರೀರಾಮತತ್ವ–ಪ್ರಕಾಶ ಮುದ್ರಾಲಯದಲ್ಲಿ ಮುದ್ರಿಸಿ ಪ್ರಸಿದ್ಧಿಪಡಿಸಿದರು ಎನ್ನುವ ಒಕ್ಕಣೆ ಪುಸ್ತಕದ ಮುಖಪುಟದಲ್ಲಿದೆ. ಪ್ರಸ್ತುತ ಆವೃತ್ತಿಯು ಸುಧಾರಿಸಿದ ೪ನೆಯದಾಗಿದ್ದು ೧೯೨೩ರಲ್ಲಿ ಪ್ರಕಾಶಗೊಂಡಿದೆ. ಇದರ ಅಂದಿನ ಕ್ರಯ ಒಂದು ರುಪಾಯಿ. . . . ಮುಂದೆ ಓದಿ
‘ಖಗೋಳ ಬಾಲಬೋಧೆ-1ನೆಯ ಭಾಗ’ ಪುಸ್ತಕವನ್ನು ಬರೆದವರು ಎಚ್.ಜಿ. ಲಿಂಗಣ್ಣ. ಈ ಕೃತಿಯ ಮೊದಲ ಮುದ್ರಣ 1928ರಲ್ಲಿ ಆಗಿದೆ. ಬೆಂಗಳೂರು ಸಿಟಿಯ ಬಿ. ಶ್ರೀನಿವಾಸ ಅಯ್ಯಂಗಾರ್ ಅವರು ಇದನ್ನು ಮುದ್ರಿಸಿ ಮೈಸೂರಿನ ಎಚ್.ಜಿ. ಲಿಂಗಣ್ಣ ಅಂಡ್ ಸನ್ ಇದನ್ನು ಪ್ರಕಾಶಿಸಿರುತ್ತಾರೆ. . . . ಮುಂದೆ ಓದಿ
ಅರಮನೆ ವಿದ್ವಾಂಸ ಪಂಡಿತ ನರಹರಿ ಜಯರಾಯಾಚಾರ್ಯರವರು 1902ರಲ್ಲಿ ಮೈಸೂರಿನ ಗ್ರಾಡುಯೇಟ್ಸ್ ಟ್ರೇಡಿಂಗ್ ಅಸೋಸಿಯೇಷನ್ ಪ್ರೆಸ್ಸಿನಿಂದ ‘ಅನುಕರಣಗೀತಲಹರಿ’ ಎನ್ನುವ ಮಕ್ಕಳ ಕವಿತೆಗಳ ಸಂಕಲನವನ್ನು ಪ್ರಕಟಪಡಿಸಿದರು. ಹಲವಾರು ಆವೃತ್ತಿಗಳನ್ನು ಕಂಡ ಈ ಕೃತಿಯನ್ನು 1992ರಲ್ಲಿ ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ಅವರು ಸಂಪಾದಿಸಿ ಮೈಸೂರಿನ ಡಿ.ವಿ.ಕೆ.ಮೂರ್ತಿ ಅವರು ಪ್ರಕಟಿಸಿ ಕನ್ನಡಿಗರಿಗೆ ಉಪಕಾರ ಮಾಡಿರುತ್ತಾರೆ. . . . ಮುಂದೆ ಓದಿ
ಬಾಲಕರ ಕನ್ನಡ ಪಾಠಗಳ ಎರಡನೇ ಪುಸ್ತಕವು- Second BOOK OF LESSONS in Canarese- ಎನ್ನುವ ಈ ಪುಸ್ತಕವನ್ನು, ಕನ್ನಡ ಭಾಷೆಯಲ್ಲಿ ಪುಸ್ತಕ ಪ್ರಸಿದ್ಧಿ ಮಾಡುವ ಮುಂಬಯಿ ಸಭೆಯವರು, ಮಂಗಳೂರು ಬಾಸೆಲ್ ಮಿಶನ್ ಛಾಪಖಾನೆಯಲ್ಲಿ 1863ರಲ್ಲಿ, ಮುಂಬಯಿ ಸಂಸ್ಥಾನದೊಳಗಿದ್ದ ದಕ್ಷಿಣ ತುಕಡಿಯಲ್ಲಿರುವ ಸರಕಾರದ ಕನ್ನಡ ಶಾಲೆಗಳಿಗಾಗಿ ಅಚ್ಚು ಹಾಕಿಸಿದ್ದಾರೆ. . . . ಮುಂದೆ ಓದಿ
‘Carnataca Translation of Esop’s Fables’ ಎನ್ನುವ ಹೆಸರಿನ ಇಸೋಪನ ನೀತಿ ಕಥೆಗಳ ಅನುವಾದವಾದ ಈ ಕೃತಿಯನ್ನು ಸಿದ್ಧಪಡಿಸಿದವನು ಸರ್ ವಾಲ್ಟರ್ ಎಲಿಯಟ್ ಹೆಸರಿನ, ಮದ್ರಾಸು ಸಿವಿಲ್ ಸೇವಾ ಪರೀಕ್ಷೆ ಮಾಡಿಕೊಂಡಿದ್ದ ವಿದ್ವಾಂಸ. Prepared under the Superintendence of Walter Elliot, Esquire, of the Madras Civil Service ಎನ್ನುವ ಒಕ್ಕಣೆ ಮುಖಪುಟದಲ್ಲಿ ನಮೂದಿತವಾಗಿರುವುದರಿಂದ ಕನ್ನಡದಲ್ಲಿ ಈ ಅನುವಾದವನ್ನು ಯಾರೋ ದೇಶೀಯ ವಿದ್ವಾಂಸನು ಮಾಡಿರಬೇಕು. . . . ಮುಂದೆ ಓದಿ
ಕಾರವಾರದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದ ಎ.ಎಸ್. ಮೂಡ ಭಟ್ಕಳರು ‘ಇಂಗ್ಲಿಷ್ ಭಾಷೆಯಲ್ಲಿ ಬರೆದ ಹೊಸಗನ್ನಡ ವ್ಯಾಕರಣವು’ (A Modern Canarese Grammar explained in English) ಎನ್ನುವ ಕನ್ನಡ ವ್ಯಾಕರಣ ಗ್ರಂಥದ ಮೊದಲ ಆವೃತ್ತಿಯನ್ನು 1899ರಲ್ಲಿ ಪ್ರಕಟಿಸಿದರು. . . . ಮುಂದೆ ಓದಿ
ಮೈಸೂರು ಮೆಡಿಕಲ್ ಸರ್ವೀಸ್ಗೆ ಸೇರಿದ ಎಂ.ಡಿ. ಶ್ರೀನಿವಾಸ ಅಯ್ಯಂಗಾರ್ ಅವರ ‘ಗರ್ಭಿಣೀ ಶಿಶು ಸಂರಕ್ಷಣ’ ೧೮೯೬ರಲ್ಲಿ ಮೈಸೂರಿನ ಗ್ರಾಜುಯೇಟ್ಸ್ ಅಸೋಸಿಯೇಷನ್ ಮುದ್ರಣಾಲಯದಲ್ಲಿ ಮುದ್ರಣಗೊಂಡ ಕೃತಿ. ಬೆಲೆ ಎಲ್ಲಿಯೂ ನಮೂದಾಗದ, ೧೬+೧೪೪ ಪುಟಗಳ ಈ ಪುಸ್ತಕದಲ್ಲಿ ಗರ್ಭಿಣಿಯರಿಗೆ ತಿಳಿವಳಿಕೆ ಉಂಟು ಮಾಡುವುದಕ್ಕಾಗಿ ೯ ಚಿತ್ರಗಳನ್ನೂ ಒಂದು ಕೋಷ್ಟಕವನ್ನೂ ನೀಡಲಾಗಿದೆ. . . . ಮುಂದೆ ಓದಿ
ಕನ್ನಡದ ಮೊದಲ ಮುದ್ರಿತ ಭಗವದ್ಗೀತೆ ಹಾಗೂ ಅನುವಾದ, ಸಂ: ರೆವರೆಂಡ್ ಜೆ. ಗ್ಯಾರೆಟ್, ಪು: 302: ಬೆಲೆ ನಮೂದಾಗಿಲ್ಲಮು: ಬೆಂಗಳೂರಿನ ದಿ ವೆಸ್ಲಿಯನ್ ಮಿಷನ್ರೆವರೆಂಡ್ ಜೆ. ಗ್ಯಾರೆಟ್ ಅವರು ಸಂಪಾದಿಸಿರುವ ‘ಕನ್ನಡದ ಮೊದಲ ಮುದ್ರಿತ ಭಗವದ್ಗೀತೆ ಹಾಗೂ ಅನುವಾದ’ (೧೮೪೬) ಒಂದು ಅಪೂರ್ವ ವಿರಳ ರೀತಿಯ ಪುಸ್ತಕ. ೧೮೪೬ರಲ್ಲಿ ಬೆಂಗಳೂರಿನ ದಿ ವೆಸ್ಲಿಯನ್ ಮಿಷನ್ ಮುದ್ರಣಾಲಯದಲ್ಲಿ B.Rungah ಎನ್ನುವವನರಿಂದ ಈ ಕೃತಿ ಮುದ್ರಣಗೊಂಡಿತು. ಪ್ರಾಯಶಃ ಅಂದಿನ ಕಾಲಘಟ್ಟದಲ್ಲಿದ್ದ ಕನ್ನಡದ ಅಕ್ಷರಗಳ ಮೊಳೆಗಳನ್ನು ಮುದ್ರಣಕ್ಕಾಗಿ ರೂಪಿಸಿದ ಬಿ.ರಂಗಯ್ಯನೇ ಈತನಿರಬೇಕು. . . . ಮುಂದೆ ಓದಿ
ಎರಡು ಆಣೆ ಬೆಲೆಯ 60 ಪುಟಗಳ ಕಿರಿಯಾಕಾರದ ಹದಿನಾರು ಅಧ್ಯಾಯಗಳನ್ನೊಳಗೊಂಡಿರುವ ಕೇಂಬಲ್ ಅಯ್ಯನವರ (Colins Campbell ) ‘ಕನ್ನಡ ವ್ಯಾಕರಣ ಸಾರ’ ಕೃತಿಯು ಮೊದಲು ಮುದ್ರಣಗೊಂಡದ್ದು 1841ರಲ್ಲಿ; ಬೆಂಗಳೂರು ಟ್ರ್ಯಾಕ್ಟ್ ಮತ್ತು ಸ್ಕೂಲ್ ಬುಕ್ ಸೊಸೈಟಿಗಾಗಿ ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್ನಲ್ಲಿ. ಪ್ರಸ್ತುತ ಕೃತಿಯು ಆ ಕೃತಿಯ 4ನೆಯ ಆವೃತ್ತಿಯಾಗಿದ್ದು 1854ರಲ್ಲಿ ಮರು ಮುದ್ರಣ ಗೊಂಡಿದೆ. . . . ಮುಂದೆ ಓದಿ
ಬೋಳಾರ ರಾಮಕೃಷ್ಣಯ್ಯನವರ ‘ನಾನಾರ್ಥ ಶಬ್ದಾವಳಿ ಮತ್ತು ಸಂಜ್ಞಾರ್ಥಗಳು’ (A kannada Vocabulary of Some Homonyms And Technical Words) ಅಷ್ಟಮ ಡೆಮಿ ಆಕಾರದ, ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ಸಿನಲ್ಲಿ ೧೮೯೫ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ನಿಘಂಟು. ಇದರ ಅಂದಿನ ಬೆಲೆ ೨ ರೂಪಾಯಿ ೮ ಆಣೆ. . . . ಮುಂದೆ ಓದಿ
‘ಮೋಹಿನೀ’ ಅಥವಾ ‘ನಿಂದಕರ ನಡವಳಿ’ ಧಾರವಾಡದ ವಕೀಲ ಗದಿಗಯ್ಯಾ ಹುಚ್ಚಯ್ಯಾ ಹೊನ್ನಾಪುರಮಠ ಅವರು ಬರೆದಿರುವ ನಾಟಕ. ಮಾರ್ಚ್ ೧೯೧೧ರಲ್ಲಿ ಪ್ರಕಟವಾದ ಈ ಕೃತಿ ಪ್ರಸಿದ್ಧ ಆಂಗ್ಲನಾಟಕಾಚಾರ್ಯ ರಿಚರ್ಡ್ ಬ್ರಿನ್ಸ್ಲೇ ಷೆರಿಡನ್ನ ‘ದಿ ಸ್ಕೂಲ್ ಆಫ್ ಸ್ಕ್ಯಾಂಡಲ್’ ಎನ್ನುವ ಇಂಗ್ಲಿಷ್ ನಾಟಕದ ರೂಪಾಂತರವಾಗಿದೆ. ೧೯೨೦ರಲ್ಲಿ ಇವರು ಶೇಕ್ಸ್ಪಿಯರ್ನ The Taming of the Shrew ನಾಟಕವನ್ನು ‘ತ್ರಾಟಿಕಾನಾಟಕ’ ಎಂದು ರೂಪಾಂತರಿಸಿದರು. . . . ಮುಂದೆ ಓದಿ
ಡಿ.ವಿ. ಗುಂಡಪ್ಪ ಅವರ ‘ನಿವೇದನ’ ಎನ್ನುವ ಈ ಕವಿತಾ ಸಂಕಲನವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಏಪ್ರಿಲ್ 1924ರಲ್ಲಿ ಪ್ರಕಟಿಸಿದೆ.ಅಷ್ಟಮ ಡೆಮಿ ಆಕಾರದ 60 ಪುಟಗಳ ಈ ಕೃತಿಯ ಎರಡನೆಯ ಮುದ್ರಣವನ್ನು 1933ರಲ್ಲಿ ಬೆಂಗಳೂರು ಸಿಟಿಯ ಕರ್ನಾಟಕ ಪ್ರಕಟನಾಲಯದವರು ಹೊರತಂದರು. ಮತ್ತೆ ಇದೇ ಪ್ರಕಟನಾಲಯದವರು 1956ರಲ್ಲಿ ಇದರ ಮೂರನೇ ಆವೃತ್ತಿಯನ್ನು ಹೊರತಂದರು. ನಂತರ ‘ನಿವೇದನ’ ಸಂಕಲನದ ಹಲವಾರು ಆವೃತ್ತಿಗಳು ಹೊರಬಂದಿವೆ. . . . ಮುಂದೆ ಓದಿ
ವಿಲಿಯಂ ರೀವ್ ಅವರ A Dictionary, Carnataka And English ಎಂಬ `ಕನ್ನಡ-ಇಂಗ್ಲಿಷ್ ನಿಘಂಟು ಜುಲೈ 14, 1832ರಲ್ಲಿ ಮದರಾಸಿನ ದಿ ಗವರ್ನಮೆಂಟ್ ಗೆಜೆಟ್ ಪ್ರೆಸ್ನಲ್ಲಿ ಮೊದಲ ಬಾರಿಗೆ ಮುದ್ರಣಗೊಂಡಿದೆ. . . . ಮುಂದೆ ಓದಿ
‘ಶಿಶು ಮತ್ತು ಶಿಶು ಜನನದ ಪೂರ್ವೋತ್ತರಗಳು’ (All about the Baby-Kanarese) ಶೀರ್ಷಿಕೆ ಮತ್ತು ‘ಆದಿಯ ಅಗತ್ಯಗಳಿಂದ ಕೂಡಿದ ಮಾನವ ಜೀವನದ ಆದಿಗಳು’ ಎನ್ನುವ ಅಡಿ ಟಿಪ್ಪಣಿಯ ಈ ಪುಸ್ತಕದ ಕರ್ತೃ ಜೆ. ಬೆಲ್ವುಡ್ ಕಾಂಸ್ಟಾಕ್. ಇದು 1930ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು 1944ಮತ್ತು 1954ರಲ್ಲಿ ಮರುಮುದ್ರಣಗೊಂಡಿದೆ. . . . ಮುಂದೆ ಓದಿ
ಇವರು ಮತ್ತೊಬ್ಬ ಕನ್ನಡ ವಿದ್ವಾಂಸ ಅಯ್ಯಾಶಾಸ್ತ್ರೀ ಗರಳಪುರಿಶಾಸ್ತ್ರೀ ಸೋಸಲೆ ನಾಮಾಂಕಿತ ವೆಂಕಟಸುಬ್ಬಶರ್ಮ (೧೮೫೪–೧೯೩೪) ಅವರ ಪುತ್ರ. ಈ ಶರ್ಮರಾದರೋ ದಮಯಂತಿ ಚರಿತ್ರೆ, ಕರ್ಣಾಟಕ ನಳಚರಿತ್ರ ನಾಟಕಂ, ಕರ್ಣಾಟಕ ಪ್ರತಾಪಸಿಂಹ ಚರಿತ್ರ ನಾಟಕಂ, ಮಹೀಶೂರ ಮಹಾರಾಜ ಚರಿತಂ, ಯಕ್ಷಪ್ರಶ್ನೆ, ರಾಜಭಕ್ತಿಲಹರಿ, ಕರ್ಣಾಟಕ ರಾಮಾಯಣ ನಾಟಕಂ, ಕರ್ಣಾಟಕ ವಿಕ್ರಮೋರ್ವಶೀಯ ನಾಟಕಂ, ಶೇಷರಾಮಾಯಣ, ಕರ್ಣಾಟಕ ಶಬ್ದಾನುಶಾಸನಂ, ಕರ್ಣಾಟಕ ಕಾದಂಬರಿ, ಕರ್ಣಾಟಕ ಭಗವದ್ಗೀತೆ, ಕರ್ಣಾಟಕ ಮಹಾಭಾರತ ಮುಂತಾದ ನಾಟಕ, ಕಾವ್ಯ ಹಾಗೂ ಸಂಪಾದಿತ ಕೃತಿಗಳನ್ನು ಕನ್ನಡ ಭಾಷೆಯಲ್ಲೂ ಮತ್ತು ಚಾಮರಾಜೇಂದ್ರ ಪಟ್ಟಾಭಿಷೇಕ ಹಾಗೂ ಕೃಷ್ಣಾಂಬಾ ಪರಿಣಯ ಎಂಬ ಕಾವಗಳನ್ನು ಸಂಸ್ಕೃತ ಭಾಷೆಯಲ್ಲೂ ರಚಿಸಿದವರು. . . . ಮುಂದೆ ಓದಿ
ಕನ್ನಡದಲ್ಲಿ ವ್ಯಾಕರಣ ಗ್ರಂಥಗಳಿಗೆ ಕೊರತೆಯೇನಿಲ್ಲ. ನಾಗವರ್ಮ (1150) ಸಂಸ್ಕೃತದಲ್ಲಿ ರಚಿಸಿದ `ಕರ್ಣಾಟಕ ಭಾಷಾಭೂಷಣಂ ಮತ್ತು ಕನ್ನಡದಲ್ಲಿ ಬರೆದ `ಶಬ್ದಸ್ಮೃತಿ, ಕೇಶಿರಾಜನ (1275) `ಶಬ್ದಮಣಿ ದರ್ಪಣಂ, ಭಟ್ಟಾಕಳಂಕ (1600) ಸಂಸ್ಕೃತದಲ್ಲಿ ರಚಿಸಿದ `ಶಬ್ದಾನುಶಾಸನಂ ಇವು ಹಳಗನ್ನಡದ ಪ್ರಮುಖ ವ್ಯಾಕರಣಗಳು. . . . ಮುಂದೆ ಓದಿ
ಎಂ.ಬಿ. ಶ್ರಿನಿವಾಸಯ್ಯಂಗಾರ್ಯ ಅವರ `ವಾಚಕ ಬೋಧಿನಿ 60 ಪುಟಗಳ ಪುಟ್ಟ ವ್ಯಾಕರಣ ಕೃತಿ. ಲೇಖಕರ ಪೂರ್ಣ ಹೆಸರು ಮಂಡ್ಯಂ ಭೀಮರಾವ ಶ್ರಿನಿವಾಸ ಅಯ್ಯಂಗಾರ್. 10 ಸಾವಿರ ಪ್ರತಿಗಳು ಅಚ್ಚಾಗಿರುವ 17ನೇ ಆವೃತ್ತಿಯಾದ ಪ್ರಸ್ತುತ ಕೃತಿಯು 1928ರಲ್ಲಿ ಮೈಸೂರಿನ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿತವಾಗಿದೆ. . . . ಮುಂದೆ ಓದಿ
ಶ್ರೀ ರಹಸ್ಯ ಬೋಧಾಮೃತ ಎಂಬ ವಿದ್ಯಾಗುರು’ ಎನ್ನುವ ಈ ಪುಸ್ತಕವನ್ನು ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿಯ ಭಾರತ ಜ್ಯೋತಿಷ್ಯ ವೈದ್ಯಾಲಯದ ಮೇನೇಜರ್ ಹಾಗೂ ಲೇಖಕ ಮತ್ತು ಪ್ರಚಾರಕ ಬಿ. ಹಯಾತ್ ಸಾಹೇಬ್, ಅವರು ೨ ಭಾಗಗಳಲ್ಲಿ ೧೯೨೭ರಲ್ಲಿ ಪ್ರಕಟಿಸಿರುತ್ತಾರೆ. ಇದು ಬೆಂಗಳೂರು ಸಿಟಿಯ ಪವರ್ ಪ್ರಿಂಟಿಂಗ್ ಪ್ರೆಸ್ನಲ್ಲಿ ಮುದ್ರಿತವಾಗಿದೆ. ೨೦೦೦ ಪ್ರತಿಗಳು ಮುದ್ರಣಗೊಂಡ ಅಷ್ಟಮ ಡೆಮಿ ಆಕಾರದ ಈ ಆವೃತ್ತಿಯ ಬೆಲೆ ೨ ರುಪಾಯಿ. . . . ಮುಂದೆ ಓದಿ
ಡಿ.ವಿ. ಗುಂಡಪ್ಪ (1887–1975) ಅವರ ‘ವೃತ್ತಪತ್ರಿಕೆ’ ಎನ್ನುವ ಈ ಕೃತಿಯು 1928ರಲ್ಲಿ ಬೆಂಗಳೂರಿನ ‘ಕರ್ನಾಟಕ ಪಬ್ಲಿಷಿಂಗ್ ಹೌಸ್’ನ ಮೂಲಕ ಮೊದಲು ಮುದ್ರಿತವಾಯಿತು. ನಂತರ ಎರಡನೆಯ ವಿಸ್ತೃತ ಮುದ್ರಣವಾಗಿ ಮೈಸೂರಿನ ಕಾವ್ಯಾಲಯದಿಂದ ೧೯೬೮ರಲ್ಲಿ ಹೊರಬಂದಿತು. ದ್ವಿತೀಯ ಮುದ್ರಣವನ್ನು ಮೈಸೂರಿನ ವೆಸ್ಲಿ ಪ್ರೆಸ್ನವರು ಅಚ್ಚು ಹಾಕಿದರು. . . . ಮುಂದೆ ಓದಿ
‘ವಿಲೇಜ್ ಡಯಲಾಗ್ಸ್’ ಹೆಸರಿನಲ್ಲಿ 1852ರಲ್ಲಿ ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್ಸಿ ನಿಂದ ಮೊದಲು ಮುದ್ರಣ ಹಾಗೂ ಪ್ರಕಾಶನಗೊಂಡ ಈ ಪುಸ್ತಕದ ಕರ್ತೃ ಮುನ್ಷಿ ಶ್ರೀನಿ ವಾಸಯ್ಯ ಎನ್ನುವ ದೇಸೀ ವಿದ್ವಾಂಸ.......ಮುಂದೆ ಓದಿ
೨೦ನೇ ಶತಮಾನದ ಮೊದಲ ಭಾಗದಲ್ಲಿ ಭಾರತೀಯ ಭಾಷೆಗಳಲ್ಲಿ ಒಂದು ಪುನರುತ್ಥಾನದ ರೀತಿಯ ಬದಲಾವಣೆ ನಡೆಯಿತು. ಹೊಸದಾಗಿ ರೂಪಿತವಾದ ವೈಚಾರಿಕ ಗದ್ಯಶೈಲಿಯಲ್ಲಿ ಸಾಹಿತ್ಯವಷ್ಟೇ ಅಲ್ಲದೆ ತತ್ವಶಾಸ್ತ್ರ ಸಂಬಂಧಿತ ಬರಹಗಳು, ಆಧುನಿಕ ವ್ಯಾಖ್ಯಾನಗಳು ಹಾಗು ಶಾಸ್ತ್ರೀಯ ಕೃತಿಗಳ ಮೇಲೆ ಐತಿಹಾಸಿಕ, ವಿದ್ವತ್ಪೂರ್ಣ ವಿಮರ್ಶಾಲೇಖನಗಳು ಹೊರಬಂದವು. ಈ ವಿದ್ವಾಂಸರಿಗೆ, ಆಧುನಿಕ ಆಂಗ್ಲ ಭಾಷೆಯ ಪರಿಣಿತಿಯೊಂದಿಗೆ ಭಾರತೀಯ ಬೌಧ್ಧಿಕ ಸಂಸ್ಕೃತಿಯ ಅಗಾಧವಾದ ಪಾಂಡಿತ್ಯದ ಅಡಿಪಾಯವಿತ್ತು. ಅವರೆಲ್ಲರೂ ಭಾರತೀಯ ಭಾಷೆಗಳನ್ನೊಳಗೊಂಡ ಒಂದು ಹೊಸ ಬೌದ್ಧಿಕ ಸಂಸ್ಕೃತಿಯನ್ನು ಸ್ಥಾಪಿಸಿ, ಪೋಷಿಸಿದರು. ಇಂತಹ ಕೃತಿಗಳು ಆಧುನಿಕ ಭಾರತದ ಬೌದ್ಧಿಕ ಇತಿಹಾಸದ ಅಧ್ಯಯನಕ್ಕೊಂದು ನಾಂದಿ ಎಂದು ಹೇಳಬಹುದು.
ಈಗ ಈ ಬೃಹತ್ತಾದ ಆಕರ ಹಲವು ಗ್ರಂಥಾಲಯಗಳಲ್ಲಿ ಮತ್ತು ಖಾಸಗೀ ಸಂಗ್ರಹಗಳಲ್ಲಿ ಹರಡಿಕೊಂಡಿವೆ. ಸಂಶೋಧಕರು, ವಿದ್ಯಾರ್ಥಿಗಳು, ಹೊಸ ಕಲಿಕಾಸಾಮಗ್ರಿಗಳನ್ನು ರೂಪಿಸುವ ವಿಶ್ವವಿದ್ಯಾಲಯಗಳ ವಿದ್ಯಾವಿಷಯಕ ಮಂಡಳಿಗಳು ಇವರಿಗೆ ಇದು ಸುಲಭ ರೀತಿಯಲ್ಲಿ ಲಭ್ಯವಿಲ್ಲ. ನಮ್ಮ ಪ್ರಯತ್ನ ಕನ್ನಡದ ಇಂತಹ ಹಲವಾರು ಮುಖ್ಯ ಆಕರಗಳನ್ನು ಏಕರೂಪವಾಗಿ ಡಿಜಿಟಲ್ ತಂತ್ರಜ್ಞಾನಕ್ಕೆ ಅಳವಡಿಸಿ, ಎಲ್ಲರಿಗೂ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡುವುದು.ಈ ಯೋಜನೆಯ ಉದ್ದೇಶವಾಗಿ ಮೊದಲಿಗೆ ಕನ್ನಡದ ೨೦ನೇ ಶತಮಾನದ ಕೃತಿಗಳು, ಮಾಸಿಕ, ಪಾಕ್ಷಿಕ ಪತ್ರಿಕೆಗಳು (ಉದಾ. ಅಡಿಗರ “ಸಾಕ್ಷಿ“, ನೀನಾಸಂನ “ಮಾತುಕತೆ”, “ಸಂವಾದ”, “ಗ್ರಂಥಲೋಕ”, ”ಋಜುವಾತು” “ಶೂದ್ರ" ಇತ್ಯಾದಿ) ಡಿಜಿಟಲ್ ಮಾಧ್ಯಮಕ್ಕೆ ತಂದು ಬಿಡುಗಡೆ ಮಾಡುವುದೆಂದು ಗುರುತಿಸಿಕೊಂಡೆವು. ನಂತರದ ಹಂತದಲ್ಲಿ ಕನ್ನಡ ನವೋದಯದ ಅತಿ ಮುಖ್ಯ ಚಿಂತಕರಾದ ತೀ.ತಾ. ಶರ್ಮ, ಮಂಜೇಶ್ವರ ಗೋವಿಂದ ಪೈ, ಸೇಡಿಯಾಪು ಕೃಷ್ಣಭಟ್ಟ, ಫ. ಗು. ಹಳಕಟ್ಟಿ, ಶಂ. ಬಾ. ಜೋಶಿ, ಆಲೂರು ವೆಂಕಟರಾಯ, ಹರ್ಡೇಕರ್ ಮಂಜಪ್ಪ, ಡಿ.ವಿ. ಗುಂಡಪ್ಪ, ಎನ್. ಎಸ್. ರಾಜಪುರೋಹಿತ, ಜಿ. ಎಸ್. ದೀಕ್ಷಿತ್; ಹೀಗೆ, ಹತ್ತು ಹಲವು ಚಿಂತಕರ ಸಮಗ್ರ ಬರಹಗಳನ್ನೂ ಈ ಡಿಜಿಟಲ್ ಆಕರದಲ್ಲಿ ಸೇರಿಸುವ ಇರಾದೆ ನಮ್ಮದು.
ಸೃಜನಶೀಲ ಯಂತ್ರಗಳ ರಚನೆ ಮತ್ತು ಬಳಕೆ
ಯಾವುದಾದರೂ ಕೆಲಸವನ್ನು ಅನ್ಯಮನಸ್ಕರಾಗಿ ಮಾಡುತ್ತಿದ್ದಾಗ ``ಕೆಲಸವನ್ನು ಯಾಂತ್ರಿಕವಾಗಿ ಮಾಡಬೇಡ, ಮನಸ್ಸಿಟ್ಟು ಮಾಡು'' ಎನ್ನುವುದಿದೆ. ಹಾಗೆಯೇ ನೀರೆತ್ತುವ ಪಂಪು ಸಂಪಿನಲ್ಲಿ ನೀರು ಖಾಲಿಯಾದರೂ ಓಡಿ ಸುಟ್ಟುಹೋದಾಗ ಪಂಪಿಗೂ ಮನಸ್ಸಿದ್ದು ನೀರು ....... ಮುಂದೆ ಓದಿ
ಕಂಪ್ಯೂಟರ್ನಲ್ಲಿ ಕನ್ನಡ ಅರಳುವ ಬಗೆ
ಈ ವಿಷಯವನ್ನು ಎರಡು ದೃಷ್ಟಿಕೋನಗಳಿಂದ ನೋಡೋಣ. ಮೊದಲನೆಯದಾಗಿ ಯಾಂತ್ರಿಕ ದೃಷ್ಟಿಯಿಂದ ಕಂಪ್ಯೂಟರ್ನೊಂದಿಗೆ ಮತ್ತು ಅದರ ಮೂಲಕ ಕನ್ನಡದಲ್ಲಿ ವ್ಯವಹರಿಸಲು ಬೇಕಾಗಿರುವ ಸಿದ್ಧತೆಗಳು. ನಂತರ ಇದನ್ನು ಬಳಸಿ ಅಂತರ್ಜಾಲ ಮಾಧ್ಯಮದಲ್ಲಿ ಕನ್ನಡ ಬೆಳವಣಿಗೆಗೆ ಅವಕಾಶ. ....... ಮುಂದೆ ಓದಿ
CSY Talks
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಜನರನ್ನು ಒಟ್ಟುಗೂಡಿಸುವಲ್ಲಿ ಮಹತ್ವದ ಸಾಂಕೇತಿಕ ಪಾತ್ರವನ್ನು ವಹಿಸಿದ್ದ ಚರಕವು ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳದೆ ಇಂದಿನ ಅಂತರ್ಜಾಲ ಯುಗದಲ್ಲೂ ಸಹ ಅಷ್ಟೇ ಮಹತ್ವದ ಸಾಂಕೇತಿಕ ಚೈತನ್ಯವಾಗಬಹುದು ಎಂಬ ಮಾತನ್ನು ನಿಮ್ಮ ಮುಂದಿಡುವುದು ....... ಮುಂದೆ ಓದಿ
ನಿಮ್ಮೊಡನೆಈ ಪುಸ್ತಕ ಪ್ರಕಟಣೆಯ ಹಿಂದೆ ಹೇಳಲೇಬೇಕಾದ ಕಥೆಯೊಂದಿದೆಇಸ್ವಿ ೨೦೦೦ದ ನವೆಂಬರ್ ಐದನೇ ತಾರೀಖು. ಸಾಗರ ಕನ್ನಡ ಸಾಹಿತ್ಯ ಪರಿಷತ್ ಸಧ್ಯಕ್ಷರಾದ ಟಿ. ಮಹಾಬಲೇಶ್ವರ ಭಟ್ಟರ ಬೇದೂರು ಮನೆಯಲ್ಲಿ ಊಟ ಮಾಡುತ್ತಿದ್ದೆವು. ‘ಇದ್ದೇವು’ ಎನ್ನುವುದರಲ್ಲಿ ಡಾ. ಹಾ. ಮಾ ನಾಯಕರು, ಪುತ್ತೂರು ಕರ್ನಾಟಕ ಸಂಘದಅಧ್ಯಕ್ಷರಾದ ಬೋಳಂತಕೋಡಿ ಈಶ್ವರ ಭಟ್ಟರು, ಪ್ರೊ, ಎಸ್. ಎನ್. ಹೆಗೆಡೆ, ಪ್ರೊ. ವಿ.ಬಿ. ಅರ್ತಿಕಜೆ, ಪುತ್ತೂರಿನ ಪುರಂದರ ಭಟ್ಟರು ಮುಂತಾದವರಿದ್ದೆವು. ಸ್ವಲ್ಪ ದೂರದಲ್ಲಿ ಟೇಬಲ್ ಮೇಲೆ ಊಟಮಾಡುತ್ತಿದ್ದ ನಾಯಕರು ಬೋಳಂತಕೋಡಿಯವರನ್ನು ಉದ್ದೇಶಿಸಿ ಭಟ್ಟರೇ ನಿಮ್ಮಿಂದ ಒಂದು ಕೆಲಸವಾಗಬೇಕು ಎಂದರು. ಕುತೂಹಲದಿಂದ ಬೋಳಂತ ಕೋಡಿಯವರು ‘ಏನದು?’ ಎಂದರು. ‘ವಾನಳ್ಳಿಯವರ ಪಿಎಚ್ಡಿ ಪ್ರಬಂಧ ಪ್ರಕಟಿಸಬೇಕು’ ಎಂದು ನಾಯಕರು ನುಡಿದಾಗ ನನಗೆ ಒಂಥರಾ ಸಂಕೋಚ. ಒಂಥರಾ ಹೆದರಿಕೆ. ಬೋಳಂತ ಕೋಡಿಯವರು ಏನು ಹೇಳುತ್ತಾರೋ ಎಂಬ ಆತಂಕ.ಮರುಮಾತಾಡದೇ ಬೋಳಂತಕೋಡಿಯವರು `ನೀವ ಹೇಳಿದ ಮೇಲೆ ಆಯ್ತು' ಎಂದು ಬಿಟ್ಟರು.ಊಟವಾದದ್ದೇ ತಡ, ಬೋಳಂತಕೋಡಿಯವರು ಪುಸ್ತಕದ ನೀಲನಕ್ಷೆ ತಯಾರಿಸಿ ಬಿಟ್ಟರು. 'ಮೈಸೂರಿನಲ್ಲೇ ಮುದ್ರಿಸಿ, ಕೆಲಸ ಚೆನ್ನಾಗಿ ಆಗಲಿ, ೨೦೦೧ರ ಹೆಸರು ಹಾಕಿ' ಮುಂತಾಗಿ ಸೂಚನೆಗಳನ್ನೂ ಕೊಟ್ಟಾಯ್ತು. ಅಲ್ಲಿಗೆ ನಾನು ಕನಸು ಮಾತ್ರ ಕಂಡಿದ್ದ ಕೆಲಸವೊಂದು ಕ್ಷಣಮಾತ್ರದಲ್ಲಿ ಕೈಗೊಡುವ ಹಂತಕ್ಕೆ ಬಂದುಬಿಟ್ಟಿತು.. . . . ಪುಸ್ತಕ